ಜಲೀಲನಿಂದ ಯಮನ ಪಾತ್ರದ ವರೆವಿಗೆ
Posted date: 29 Thu, Dec 2011 ? 09:12:56 AM

ಕರ್ನಾಟಕ ಚಲನಚಿತ್ರ ಅಕಾಡಮಿರವರು ನಡೆಸಿದ ೨೫ನೇ ವಿಶೇಷ ಬೆಳ್ಳಿಹೆಜ್ಜೆ ಮುಖಾಮುಖಿಯಲ್ಲಿ ಹಿರಿಯ ನಟ ರೆಬಲ್ ಎಂದೇ ಖ್ಯಾತರಾದ ಅಂಬರೀಷ್ ೩ ದಶಕಗಳ ಕಾಲ ಚಿತ್ರರಂಗದಲ್ಲಿ ತಾರಕ ಸ್ಥಳಕ್ಕೆ ಬೆಳೆದುಬಂದ ದಾರಿಯ ಬಗ್ಗೆ ಯಾವುದೆ ಭಿಡೆಯಿಲ್ಲದೆ ನಿರರ್ಗಳವಾಗಿ ವಿಡಂಬನ ರೀತಿಯಲ್ಲಿ ಗತವರ್ಷದ ನೆನಪುಗಳನ್ನು ಪಲಕು ಹಾಕಿಕೊಂಡರು. ನಾವುಗಳು ಬರೆಯುವುದಕ್ಕಿಂತ ಅವರು ಹೇಳಿದ ಮಾತುಗಳು ನಿಮಗಾಗಿ. ಓವರು ಟು ಅಂಬರೀಷ್.॒
        ನಾನು ನಟನಾಗಲು ಬರಲಿಲ್ಲ. ಆಕಸ್ಮಿಕವಾಗಿ ಬಂದೆ.  ಜಲೀಲ ಪಾತ್ರದಿಂದ ಯಮನ ಪಾತ್ರದವರೆಗೂ  ಇಲ್ಲಿಯವರೆವಿಗೂ ನಟಿಸುತ್ತಾ ಬಂದಿರುತ್ತೇನೆ. ಸಂಗ್ರಾಮ್‌ಸಿಂಗ್ ಪರಿಚಯವಿದ್ದ ಕಾರಣ ಅವರು ಪುಟ್ಟಣ್ಣನವರ ಹತ್ತಿರ ಕರೆದುಕೊಂಡು ಹೋಗಿ ನನ್ನನ್ನು ಶತ್ರುಜ್ಘಸಿನ್ನಾರಿಗೆ ಹೋಲಿಸಿ ಚಿತ್ರದಲ್ಲಿ ಪಾತ್ರ ನೀಡಲು ಶಿಪಾರಸ್ಸು ಮಾಡಿದರು. ಪುಟ್ಟಣ್ಣನವರು ನನ್ನ ಮುಖವನ್ನು ಒಂದು ಬಾರಿ ದಿಟ್ಟಿಸಿ ನೋಡಿ ಮೇಕಪ್‌ಮ್ಯಾನ್ ಕರೆಸಿ ನನಗೆ ಮೇಕಪ್ ಹಾಕಿಸಿ ನಾನು ಸಿಗರೇಟ್‌ನ್ನು ಕೆಳಗಿನಿಂದ ಬಾಯಿಗೆ ಸ್ಟೈಲಿಶ್ ಮಾಡುತ್ತಾ ಬಾಯಿಗೆ ಹಾಕಿದಾಗ ಅವರು ಖುಷಿಗೊಂಡು ನನಗೆ ಖಳನಾಯಕನಾಗಿ ನಟಿಸಲು ಆಹ್ವಾನವಿತ್ತರು. ವಯಸ್ಸು ೧೪ರ ತನಕ ನಾನು ಓದಿನ ಕಡೆಗೆ ಗಮನಕೊಟ್ಟು ಕಾಲೇಜು ಸೇರಿದ ನಂತರ ಎಲ್ಲದರಲ್ಲಿ ಎ ಗ್ರೇಡ್ ಹೊಂದಿದೆ ಅಂದರೆ ಆಬ್‌ಸೆಂಟ್ ಎಂದು ನಕ್ಕು, ತಾಯಿಗೆ ೫ ಮಕ್ಕಳಲ್ಲಿ ನಾನೆ ಕಡೆಯವನಾಗಿದ್ದರಿಂದ ಎಲ್ಲರೂ ನನ್ನನ್ನು ಪ್ರೀತಿಸುತ್ತಿದ್ದರು. ಹಾಗೆಯೆ ಎಲ್ಲರು ವಿದ್ಯಾವಂತರಾಗಿದ್ದು, ನಾನು ಮಾತ್ರ ಕಲೆಕಡೆ ಗಮನ ಹರಿಸಿದಾಗ ತಂದೆಯವರು ಬೇಸರಗೊಂಡು ಏನು ಮಾತನಾಡದೆ ಸುಮ್ಮನಿದ್ದರು. ನಾಗರಹಾವು ಚಿತ್ರದ ನಂತರ ಮತ್ತೋಮ್ಮೆ ಖಳನಾಯಕನಾಗಿ ದೇವರಕಣ್ಣು ಚಿತ್ರದಲ್ಲಿ ಅತ್ಯಾಚಾರ ಮಾಡುವ ಪಾತಖಳನಾಯಕ ಪಾತ್ರ್ರ ಮಾಡಿ ಆ ಪಾತ್ರಕ್ಕೆ ಪ್ರಶಸ್ತಿ ಬಂದರೂ  ತಂದೆ ಚಿತ್ರ ನೋಡಿ ನನ್ನನ್ನು ವಾಚಾಮಗೋಚರವಾಗಿ ಬೈದರು. ಆ ಬೈಗುಳ ಕಡಿಮೆ ಆಗಿದ್ದು ನಾಗರಹೊಳೆ ಚಿತ್ರ ಬಿಡುಗಡೆಯಾದಮೇಲೆ. ಅಮರನಾಥ್ ಚಿತ್ರದ ಮುಖಾಂತರ ನಾಯಕನಾಗಿ, ನ್ಯಾಯನೀತಿಧರ್ಮ ಚಿತ್ರದಲ್ಲಿ ನಟಿಸಿದರೂ  ಅಂತ ಚಿತ್ರದಲ್ಲಿ ನಟಿಸಿದಾಗ ಅದು ಇಡೀ ಭಾರತದಾದ್ಯಂತ ಪ್ರಸಿದ್ದಿಯಾಗಿ ನನಗೆ ಚಿತ್ರರಂಗದಲ್ಲಿ ತಿರುವುಕೊಟ್ಟು ಉದ್ಯಮದಲ್ಲಿ  ಭದ್ರಬುನಾದಿ ಹಾಕಿಕೊಟ್ಟು ಹಿಂದೆ ತಿರುಗಿ ನೋಡದಂತೆ ಮಾಡಿ ಇಲ್ಲಿಯವರೆವಿಗೂ ನಟಿಸುತ್ತಾ ನಿಮ್ಮ ಮುಂದೆ ಕುಳಿತಿರುತ್ತೇನೆ.
        ನಾನು ದಾನದರ್ಮ ಮಾಡುತ್ತಿರುವುದು ನನ್ನ ತಂದೆಯಿಂದ ಬಂದ ಬಳುವಳಿ. ಆಗ ೭ ಚಿತ್ರಗಳ ಸಂಭಾವನೆಯನ್ನು ನನ್ನ ಜೀವನಕ್ಕೆ ಉಪಯೋಗಿಸಿಕೊಳ್ಳುತ್ತಿದ್ದೆ ಉಳಿದ ೭ ಸಿನಿಮಾದ ಸಂಭಾವನೆಯನ್ನು ನಷ್ಟದಲ್ಲಿರುವ ನಿರ್ಮಾಪಕರುಗಳಿಗೆ ಸಹಾಯ ಮಾಡುತ್ತಿದ್ದೆ. ಮನೆ ಕಟ್ಟಿದ ನಂತರ ೩೯ನೇ ವರ್ಷಕ್ಕೆ ಮದುವೆಯಾದೆ. ಇಲ್ಲಿಯವರೆವಿಗೂ ಉದ್ಯಮದಲ್ಲಿ ಇರುವುದು ನನಗೆ ತೃಪ್ತಿಕೊಟ್ಟಿದೆ. ರಾಜಕೀಯಕ್ಕೆ ಆಕಸ್ಮಿಕವಾಗಿ ಸೇರಿಕೊಂಡು ಲೋಕಸಬಾಸದಸ್ಯನಾಗಿ ವಾರ್ತಾ ಮಂತ್ರಿ ಪದವಿ ಬಂದರೂ ಆಗ ಮಂಡ್ಯಾದಲ್ಲಿ ಕಾವೇರಿ ಚಳುವಳಿ ನಡೆಯುತ್ತಿರುವುದರಿಂದ ಪದವಿಗೆ ಆಸೆ ಪಡದೆ ಸೋನಿಯಾಗಾಂಧಿ ಜೊತೆಗೆ ಮಾತನಾಡಿ ರಾಜಿನಾಮೆ ನೀಡಿದೆ. ನಮ್ಮ ಕಾಲದಲ್ಲಿ ಒಂದು ಸಿನಿಮಾ ಮಹೂರ್ತ ಶುರುವಾದರೆ ಎಲ್ಲ ವಿವರಗಳು ತಿಳಿಯುತ್ತಿದ್ದವು. ಈಗ ನನ್ನ ಹತ್ತಿರ ಕೆಲವು ಜನರು ಬಂದು ಮಹೂರ್ತಕ್ಕೆ  ಆಹ್ವಾನ ಮಾಡಲು ಬರುತ್ತಾರೆ. ನಾನು ನಿರ್ಮಾಪಕ, ನಿರ್ದೇಶಕ, ನಾಯಕ ಯಾರು ಎಂದು ಕೇಳಿದರೆ ನಾನೇ ಎಂದು ಹೇಳುತ್ತಾರೆ. ಆಗ ಕೋಪ ಬಂದು ಹೋಗಪ್ಪಾ ಎಂದು ಹೇಳಿ ಕಳುಹಿಸುತ್ತೇನೆ . ಇಂದಿನ ಸ್ಥಿತಿ ಈ ರೀತಿ ಇದ್ದರೆ ಉತ್ತಮ ಚಿತ್ರಗಳು ಹೇಗೆ ಬರಲು ಸಾದ್ಯ. ಸರ್ಕಾರವು ಚಿತ್ರರಂಗಕ್ಕೆ ಮಾರ್ಗಸೂಚಿಯನ್ನು ನೀಡಿರುವುದು ಸರಿಯಲ್ಲ. ಅದಕ್ಕಿಂತ ಫಿಲೀಂಸಿಟಿ, ಫ್ಲೋರ್‌ಸೆಟ್ ಕಟ್ಟಿಸಿದರೆ ಉದ್ಯುಮಕ್ಕೆ ಸಹಾಯವಾಗುತ್ತದೆ ಎಂದು ನನ್ನ ಅಭಿಪಾರಯ. ಮುಂಗಾರುಮಳೆಯಂಥ ೫ ಸಿನಿಮಾಗಳು ಬಂದರೆ ಚಿತ್ರರಂಗ ಉದ್ದಾರವಾಗುತ್ತದೆ. ನಾನು ಸಹ ಟೋನಿ ಚಿತ್ರಕ್ಕೆ ನಟನೆ ಜೊತೆಗೆ ಹಣಹಾಕಿದ್ದೆ. ಆಗ ನಿರ್ಮಾಪಕನ ಜವಬ್ದಾರಿ ಏನೆಂದು ಅರಿತುಕೊಂಡು ಇದು ಕಷ್ಟದ ಕೆಲಸವೆಂದು ಭಾವಿಸಿ ಮುಂದೆ ಚಿತ್ರ ನಿರ್ಮಿಸಲು ಮನಸ್ಸು ಮಾಡಲಿಲ್ಲ. ನಾನು ಖಳನಾಯಕನಾಗಿ  ಮತ್ತು ವಿಷ್ಣು ನಾಯಕನಾಗಿ ಬಂದರೂ ನಮ್ಮಿಬ್ಬರ ಸ್ನೇಹ  ಅಮರವಾಗಿತ್ತು. ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ಮತ್ತು ಮರಾಠಿಗರ ಬಗ್ಗೆ ಮಾತನಾಡುತ್ತಾ ನಮಗೆ ರಾಜ್‌ಕುಮಾರ್ ತರಹ ಚಳುವಳಿ ಮಾಡಲು ಸಾದ್ಯವಾಗುವುದಿಲ್ಲ ಅಲ್ಲದೆ ನನಗೆ ವಯಸ್ಸು ಆಗಿದೆ ಎಂದು ಅದರ ಬಗ್ಗೆ ಪ್ರಶ್ನೆ ಮಾಡಿದವರಿಗೆ ಒಂದೆ ಮಾತಿನಲ್ಲಿ ಹೇಳಿ ಸದರಿ ವಿಷಯಕ್ಕೆ ತೆರೆ ಏಳೆದರು ಅಂಬರೀಷ್. ಪುಟ್ಟಣ್ಣ ಕಳಗಾಲ್ ಚಿತ್ರ ಮಂದಿರ ಇನ್ನೇನು ಹೊಸ ರೀತಿಯಲ್ಲಿ ಪ್ರಾರಂಭವಾಗಲಿದೆ. ಕಲಾವಿದರ ಸಂಘದ ನಾಯಕನಾಗಿದ್ದರೂ ಒಗ್ಗಟ್ಟು ಇಲ್ಲದ ಕಾರಣ ಕೆಲವು ಸೂಕ್ಷ ವಿಚಾರಗಳನ್ನು ಸರಿಪಡಿಸುವುದು ಕಷ್ಟಕರವಾಗಿದೆ ಮತ್ತು ಕನ್ನಡ ಶಾಲೆಗಳು ಮುಚ್ಚುತ್ತಿರುವ ವಿಷಯವನ್ನು  ಕೆದಕಿದಾಗ  ಐನಾತಿ ಮಾತುಗಳಲ್ಲಿ ಹೇಳಿ ವಾದಕ್ಕೆ ತೆರೆ ಏಳೆದರು. ಈಗ ಯಮನ ಪಾತ್ರ ಮಾಡುತ್ತಿರುವುದರಿಂದ ನನ್ನ ಹೆಂಡತಿ ಸುಮ ವಿತ್ ಯಮ ಎನ್ನುತ್ತಾಳೆ. ಹಿಂದೆಯಲ್ಲಾ ನನ್ನ ಹತ್ತಿರ ನಿರ್ಮಾಪಕರು ಬಂದಾಗ ಮೂದಲು ನಾನು ಕೇಳುತ್ತ್ತಿದ್ದ ಪ್ರಶ್ನ ನಾಯಕಿ ಯಾರೆಂದು ಎನ್ನುತ್ತಾ ಸುಮ ನೆನಪಿಸಿಕೊಂಡು ನನ್ನನ್ನು ಕೆಣಕುತ್ತಿರುತ್ತಾಳೆ.  ಪ್ರಸಕ್ತ ರಾಜಕೀಯ ಬಗ್ಗೆ ಪ್ರಸ್ತಾಪ ಮಾಡಿದಾಗ ಅದರ ಬಗ್ಗೆ ಕೇಳಬೇಡಿ ನಾನು ಚಿತ್ರರಂಗದಲ್ಲೆ ಆಯಾಗಿದ್ದೇನೆ. ನಂತರ  ನೆರೆದಿದ್ದ ಜನರು ಪ್ರಶ್ನಗಳನ್ನು ಕೇಳುತ್ತಾರೆ ಎಂದು ಅರಿತು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಾಗಭರಣರನ್ನು ಸಾಕುಬಿಡಪ್ಪಾ ಎಂದು ಹೇಳಿ ಎದ್ದೇ ಬಿಟ್ಟರು ಅಂಬರೀಷ್. ಬಂದಂತ ಸಿನಿಮಾಪ್ರಿಯರಿಗೆ ಇಷ್ಟು ಹೊತ್ತು ಅಂಬರೀಷ್ ಜೊತೆಗೆ ಕಾಲಕಳೆದವು ಎಂಬ ಸಂತೋಷ ಕಾಡಿತ್ತು. ಛೆಂಬರ್ ಅಧ್ಯಕ್ಷ ಚಂದ್ರಶೇಖರ್, ನಿರ್ಮಾಪಕ ಅಂಕಲಗಿ, ಸಿನಿಮಾ ಪಿಆರ್‌ಓ ಗಳು ಉಪಸ್ತಿತರಿದ್ದರು.
                                                                                                                                                                                                        ಆರ್‌ಸಿಎಸ್


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed